ಬಿಗ್ ಬಾಸ್ ಗಲಾಟೆ ನಂತರ ಶ್ರೀ ಲಂಕಾಗೆ ಹಾರಿದ ಸಂಯುಕ್ತ ಹೆಗ್ಡೆ | FIlmibeat Kannada

2017-12-29 1,790

Kannada actress Samyuktha Hegde after leaving the big boss, the actress is on a trip to Sri Lanka, Samyuktha's Telugu film Kirik Party will be released in February.

ಸಂಯುಕ್ತ ಹೆಗಡೆ.. ಕಳೆದ ವರ್ಷ ಬಿಡುಗಡೆಯಾದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಾಯಕ ನಟಿ. ಮೊದಲ ಸಿನಿಮಾದಲ್ಲೇ ಸಖತ್ ಪ್ರಖ್ಯಾತಿ ಪಡೆದುಕೊಂಡ ನಟಿ. ಒಂದೇ ಸಿನಿಮಾದಲ್ಲಿ ಸಾವಿರಾರು ಅಭಿಮಾನಿಗಳು ಈ ನಟಿಗೆ ಹುಟ್ಟಿಕೊಂಡಿದ್ದರು. ಆನ್ ಸ್ಕ್ರೀನ್ ನಲ್ಲಿ ಸಖತ್ ಎನರ್ಜಿ ಆಗಿ ಅಭಿನಯಿಸುತ್ತಾರೆ ಅನ್ನೋ ಉದ್ದೇಶಕ್ಕೆ ಸಂಯುಕ್ತ ಅವರಿಗೆ ಆಫರ್ ಗಳು ಕೂಡ ಸಾಲಾಗಿ ಬಂದವು. ಸಂಯುಕ್ತ ಹೆಗಡೆ ಒಂದೆರೆಡು ಸಿನಿಮಾಗಳಿಗೆ ಅಡ್ವಾನ್ಸ್ ಪಡೆದು ನಂತರ ಅಭಿನಯಿಸೋದಿಲ್ಲ ಎಂದು ಕಿರಿಕ್ ಮಾಡಿದ್ದು ಉಂಟು. 'ಕಿರಿಕ್ ಪಾರ್ಟಿ' ಸಿನಿಮಾಗೆ ನಾಯಕಿ ಆಗಿದ್ದಕ್ಕೋ ಏನೋ ಈ ನಾಯಕಿ ಹೋದೆಲೆಲ್ಲಾ ಕಿರಿಕ್ ಅನ್ನೋ ಪಟ್ಟ ಕಟ್ಟಿಕೊಂಡರು. ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಹಾಗಾದ್ರೆ ಸಂಯುಕ್ತ ಹೆಗಡೆ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಇದಕ್ಕೆ ಉತ್ತರ.. ಇಲ್ಲಿದೆ

Videos similaires